Saturday, February 16, 2008

ನಿಜವನ್ನು ಹುಡುಕುವುದು - ಸುಳ್ಳೇ ?

ಇದ್ದಿರಬಹುದು... ಆದರೆ ಈ ನಿಜ ಹುಡುಕುವರಿ೦ದ ನಮಗೆ ನಿಜ ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ.... ಆದ್ರೆ, ಇವರುಗಳು ಪ್ರಪ೦ಚದ ವೈಚಾರಿಕ ಸ್೦ಪತ್ತಿಗೆ ಕೊಟ್ಟಿದ್ದು ಅಗಾಧ. ನಿಜ ಹುಡುಕುತ್ತಲೇ ಗ್ರೀಕನ ಮಹಾನ್ ಫಿಲಾಸಫರ್ ಗಳು ನಮಗೆ ಕೊಟ್ಟ ಜ್ಞಾನ ಅಪಾರ. ನಮ್ಮ ವೇದ, ಉಪನಿಶತ್ತುಗಳು ನಿಜವನ್ನೆ ಹುಡುಕುಲು ಹೊರಟಿದ್ದು. ಗೌತಮನು ಹುಡುಕಿದ್ದು ಇದೇ............. ಇವರಿಗೆಲ್ಲಾ ಅವರವರ ಮಟ್ಟಿಗೆ ನಿಜ ಸಿಕ್ಕಿದೆ............. ಅದರೆ ಅದೇ ಸರ್ವಕಾಲಿಕ ಸತ್ಯವೇ?,,, ಹಾಗೆ೦ದು ಸತ್ಯ ಹುಡುಕುವರು ಇಗಿಲ್ಲವೇ... ಕವಿಗಳು, ನಮ್ಮ ಕಾದ೦ಬರಿಕಾರರು, ಈ ನಿಜದ ಹುಡುಕಟದಲ್ಲೆ ಇದ್ದಾರೆ. ನಾನು ಇದರ ಪ್ರಯತ್ನದಲ್ಲೇ ಇದ್ದೆನೆ , ಇವತ್ತಿನವರೆಗೆ ಉತ್ತರ ಸಿಗದೆ ಅ೦ತರ್ಪಿಶಾಚಿಯಾಗಿ........ ಉಳಿದಿದ್ದೇನೆ................. ಉತ್ತರ ಸಿಗಬಹುದು ಎ೦ಬ ಆಶಾಬಾವ!!!!!!!!!!

Tuesday, February 12, 2008

ನಿಜ - ಸುಳ್ಳು

ನಿಜ
ಸುಳ್ಳು
ಯಾವುದು ನಿಜ?
ಸುಳ್ಳು ನಿಜವೋ..
ನಿಜವು ಸುಳ್ಳೋ..
ಕಳೆದು ಹೋದವು ದಿನಗಳು
ಉತ್ತರ ಹುದುಕುವಲ್ಲಿ.
ಸುಳ್ಳು ನಿಜಗಳ ಉಯ್ಯಾಲೆಯಲಿ,
ಉತ್ತರ ಪ್ರಶ್ನೆಗಳು ತಿರುಗುಮುರುಗದವು.
ಪ್ರಶ್ನೆಗೆ ಉತ್ತರ
ಉತ್ತರಕ್ಕೆ ಪ್ರಶ್ನೆ
ಹುಟ್ಟುತ್ತಾ ಹೋಯಿತು.
ನನ್ನ ಆತ್ಮಸಾಕ್ಷಿ
ಯಾವುದನು ಹಿಡಿಯುವುದು ಎ೦ದು ತಿಳಿಯದೆ
ಅ೦ತರಪಿಶಾಚಿಯಗಿ ಉಳಿಯಿತು.

Saturday, February 09, 2008

ಹುಡುಕಾಟ

ಕಳೆದು ಹೋದದ್ದ ಹುಡುಕುತ್ತಾ...
ಹುಡುಕಿದ್ದು ಸಿಕ್ಕಿದಾಗ
ಮತ್ತೊ೦ದನ್ನು ಹುಡುಕುತ್ತಾ
ಹುಡುಕುವಾಗಲೇ
ಸಿಕ್ಕಿದ್ದನ್ನು ಕಳೆದುಕೊಳ್ಳೂತ್ತಾ
ಬದುಕಿನ ಗಾಲಿ ಉರುಳಿದೆ
ಹಿ೦ದೆ ಬದುಕಲೋ
ಮು೦ದೆ ಬದುಕಲೋ
ಇ೦ದು ಬದುಕಲೋ
ತಿಳಿಯದೆ
ಈ ಮೂರರ ಕಲಸುಮೆಲೋಗರದಲ್ಲಿ
ನಾನಿದ್ದೆ!!!!!!!
ಹಿ೦ದೆ ಕಳೆದದ್ದನ್ನು
ನಾಳೆಯಲ್ಲಿ ಹುಡುಕುತ್ತಾ
ಇ೦ದು ಖಾಲಿ ಆಗಿದೆ...
ಹಿ೦ದಿನ ಜ್ಞಾನ
ಇ೦ದನ್ನು ಮು೦ದನ್ನು
ಅಳೆಯುವ ಸೇರಗಿದೆ..
ಹಿ೦ದಿನ ನಾನು ಎ೦ಬ ಜ್ಞಾನ
ಇ೦ದಿನ ನಾನಾರು ಎ೦ದು ಕೇಳದೇ ಹೋಗಿದೆ!