Thursday, August 05, 2010

ಮುಂಜಾವು

ಮುಕವರಳಿ
ನಗುವರಳಿ
ಬೆಳಗಾಯ್ತು
ಪುಟ್ಟ ಗೌರಿಗೆ.
ಪ ಪ ಪಾ ಕೇಕೆಯೊಂದು
ದೂರದಲ್ಲಿ ಕೇಳಿತ್ತು
ಆಳದಾನಿದ್ರೆಯಲ್ಲಿದ್ದವನಿಗೆ.

ಮೃದು ಬೆರಳುಗಳು
ಎಳೆಯುತಿದ್ದವು ನನ್ನೊರಟ ಗಡ್ಡವ;
ಕಣ್ಣ ಬಿಟ್ಟವನಿಗೆ
ಸಿಕ್ಕಿತ್ತು
ಬೆಲ್ಲದಾ ನಗು.
ಸುಖವೆಂದರೆ
ಇದ ಬಿಟ್ಟು ಬೇರುಂಟೇ?