Saturday, July 25, 2020

ಪಶ್ಚಾತಾಪ

ಅವಳ ನೋಡದಾಗೆಲ್ಲ
ತಲೆ ಒಳಗೆ ಮೆದಳು
ತಿರುಗಿ ಮತ್ತೆ
ಸರಿ ಮಾಡಿಕೊಂಡು
ಕುತ್ಕೊಳ್ಳತ್ತೆ .

ನಿದಾನ ನಡಿಗೆ
ಉದ್ದ ಗಿಡ್ಡ
ಕಾಲು
ಒಂದ್ಕಾಲ ಚಪ್ಪಲಿ
ಸವೆದು. 

ಕೈ ಹೋಗದ ಜಾಗದಲ್ಲೆಲ್ಲಾ
ಬಿಳಿ ಬಿಳಿ .
ಬಾಕಿ ತಲೆ ಕೂದಲು
ಮೆಹಂದಿ ರಂಗು .

ಇತ್ತೀಚಿಗೆ ಕನ್ನಡಕದ
ಗೋಲ  ಬಂದಿದೆ. 
ಮುಖದ ಮೇಲೆ
ಮತ್ತೊಂದು ಪದರು. 

ಅವಳ ನಗು ಎಲ್ಲಿ
ಶುರುವಾಗತ್ತೆ ಅಂತ
ಹೇಳೋದು ಕಷ್ಟ
ಆದರೆ ಮೊನಾಲಿಸಾ ತರ !
ಸ್ವಲ್ಪ ಸಕ್ಕರೆ ಬೇಕು ಅನಿಸುವ
ಕಾಫಿ  ತರ .

ಆ ಒಂದು ಬೆಳೆಗ್ಗೆ 
ರಸ್ತೆಯಲ್ಲಿ ಸಿಕ್ಕಳು  
ನಿಂತು 
ಮಾತಾಡಿಸದಳು 
ಮಾತೆಲ್ಲ ತೇಲಿಸಿದಳು 
 ಎರಡು
ಮಾತಿನ ನಂತರ
ನನ್ನ ಮಾತು ಮುಗಿದು
ದೇಶಾವರಿ ನಗು ನಕ್ಕು
ಬೆಳಿಗ್ಗೆ ಬೆಳಿಗ್ಗೆ
ಇವಳ್ಯಾಕೆ ಸಿಕ್ಕಳು
ಅಂತ ಹಳಿಯುತ್ತಾ
ಬೀಸುಗಾಲು ಹಾಕುತ್ತ
ಅಲ್ಲಿಂದ ದೂರ
ನೆಡೆದೆ.


ಈಗ ನಂಗೆ
ಕಹಿ ಕಹಿ
ಇಕ್ಕಟ್ಟು
ಸಣ್ಣ ಅಂಗಿ ಹಾಕಿದಾಗ
ಕಂಕಳಲ್ಲಿ ತರೆದಂಗೆ ,
ಮೆದುಳಿನ ಆ ಮೂಲೆ
ಈ ಬಿರಕಿನಲಿ
ಅವಳ ನಗು ಸಿಕಾಹ್ಕಿಕೊಂಡು
ಗಂಟಲು ಕ್ಯಾಕರಿಸಿದೆ
ಸಂಕಟ ಹೋಗದು
ನ ಯಾರೋ ಅವಳು ಯಾರೋ
ಎಂದು ಸಮಾಧಾನ ಮಾಡ್ಕೊಂಡೆ .


ಆದ್ರೆ ಸ್ವಾಮಿ
ತಪ್ಪು ಆಗ್ಬಿಟ್ಟಿದೆ. 
ನಾಕು ಒಳ್ಳೆ ಮಾತಾಡ್ಬೇಕಿತ್ತು ,
ನನ್ನ ಗಂಟೇನು ಹೋಗೋತಿತ್ತು
ಈಗ ಈ ಗೋಡೆ ಆ ನೆಲ
ಎಲ್ಲ ನನ್ನ ದುರು ದುರು
ನೋಡಕ್ಕ ಹಿಡಿದ್ಯಾವ.
ದೇವ್ರಿಗೆ ಎರಡು ಕಾಯ
ಒಡೆದರೂ ಅದರಲ್ಲಿ
ಒಂದು ಕಾಯಿ ಹಾಳು.

ಈಗ ಸಂಜೆ
ನನ್ನೊಳಗೆ ಸುಂಟರ  ಗಾಳಿ
ಜೋರಾಗಿದೆ.
ಹೊಟ್ಟೆಲೆಲ್ಲ ತೋಳಸ್ತಾ ಇದೆ .
ಊಟ ಸೇರಲ್ಲ
ನಿದ್ರೆ ಬಾರದ ಆ ರಾತ್ರಿ
ಬ್ರಹ್ಮ ರಾಕ್ಷಸನಾಗಿ
ಕಾಯ್ತಾ ಇದೆ. 

ಎರಡು ಮಾತು
ನಗುನಗುತಾ
ಆಡಿದ್ದರೆ?

ಹುಂಬ

ನಾನೊಬ್ಬ ಹುಂಬ
ನಿಂತಲ್ಲಿ ಕಂಬ
ನನ್ನ ನೆಲೆ ಬಿಟ್ಟು
ಆಚೀಚೆ ಹಂದೆ !

ಯಾರ ಹೇಳಿದರು
ಕೇಳದ ಕೊರಡು

ಇವರಿಗೇನು ಗೊತ್ತು
ಬರೀ ಖಾಲಿ ಹೊಟ್ಟು

ನನಗೇನು ಗೊತ್ತಿಲ್ಲ
ಅನ್ನುತ್ತಾ ...
ಒಳಒಳಗೆ
ನಂಗೆಲ್ಲ ಗೊತ್ತು
ಎಂದು ಬೀಗುತ್ತ
ಕಟ್ಟೆ ಮೇಲೆ
ಕೈ ಕಟ್ಟಿ ಕುಳಿತೆ. 

ನದಿಯಾಚೆ
ಕಡಲಾಚೆ
ಗುಡ್ಡದಾಚೆ ಏನುಂಟು
ಯಾರು ಕಂಡವರು ?
ತುಂಬಾ ಏನೇನೂ
ಇದೆ ಎಂದು
ಹೇಳುವರು ಉಂಟು.
ಕಾಣದೆ ಇರುವುದು
ಏನುಇಲ್ಲಾ .
ಎಂದು ಹೇಳುವ ಹುಂಬ
ನಾನೊಬ್ಬ.

Saturday, July 18, 2020

ಸೋಲು

ಸೋಲು
ಸೋಲಿನ ರುಚಿ ಸಿಹಿ!
ಸಿಹಿ ಸಿಹಿ ಸಿಹಿ
ಮೂರು ಸಲ
ಹೇಳಿದೆ
ಸಿಹಿ.

ನೀನೇಕೆ
ಕೇಳಬಯಸಿದೆ
ಕಹಿ?

ಹಲವು ಸಲ
ಸೋತೆ
ಮೊದಲು
ಕಚ್ಚಾ ಕಹಿ
ನಂತರ ಬರೀ ಕಹಿ
ಆಮೇಲೆ ಸಪ್ಪೆ
ಮತ್ತೊಮ್ಮೆ ಸೋತೆ
ಆಗ ಸಿಹಿ
ಕಹಿ ಹೋಗಿ ಸಿಹಿ.

ನಂಗೆ ಗೊತ್ತಿಲ್ಲ
ನಾ ಯಾವಾಗಾದರೂ
ಗೆದ್ದರೆ
ನನ್ನ ಬಾಯೆಲ್ಲ
ಕಹಿ ಕಹಿ!. 

Tuesday, July 07, 2020

ಒಳ ನೋಟ

ನಂಗೆ ನನ್ನ ಕಂಡರೆ
ಇಷ್ಟ ಇಲ್ಲ 
ಯಾಕೆ ಗೊತ್ತಿಲ್ಲ.

ಕನ್ನಡಿ ನೋಡದಾಗೆಲ್ಲ
ಬೇಜಾರು.
ಅವರು ಇವರು
ಹೊಸದು ತಂದಾಗೆಲ್ಲಾ
ನನಗೇಕೋ ಕಸಿವಿಸಿ.

ನಲಿಗೆ ತುದಿಯಲ್ಲಿ
ಕೊನೆಯಲ್ಲಿ
ಎಲ್ಲಾ
ಕಹಿ ಕಹಿ. 

ಹೋಗಲಿ ಬಿಡಿ
ನಾಯಾಕೆ ಅಲಕ್  ನಿರಂಜನ್
ಆಗಿ ಎಲ್ಲ ಬಿಟ್ಟು
ಆರಾಮಾಗಿ ಇರಬಾರದು ?

ಅದೂ ಆಗಿಲ್ಲ .
ಬಿಡಲು ಆಗದೆ
ಹಿಡಿಯಲು ಆಗದೆ
ಎಡಬಿಡಂಗಿ ಆಗ್ಬಿಟ್ಟೆ .

ಪುಸ್ತಕ ಓದಿದೆ.
ತರ್ಕ ಮಾಡಿದೆ .
ದೊಡ್ಡವರ ವಚನನೂ
ಕೇಳ್ದೆ ,

ಆದ್ರೇನು
ಹಾಳು ಮನಸ್ಸು
ಕಗ್ಗ ಎಮ್ಮೆ ತರ
ಎಲ್ಲಿನ್ದಎಲ್ಲಿಗೆ
ಎಳೆದು ಎಳೆದು
ಮನ್ಸಒಳಗೆಲ್ಲ ತರಚಿ
ಒಂತರ ಉರಿ
ಹರಡಿಕೊಂಡು
ಗೋಳು ಹೊಯಿತಿದೆ. 

ನಾಳೆಯಿಂದ ಧ್ಯಾನ
ಮಾಡಬೇಕು. 
ಮನಸಿನೊಳಗೆ
ಶಾಂತಿ ತರಬೇಕು. 
ನನ್ನ ನಾನು
ಪ್ರೀತಿ ಮಾಡಬೇಕು. 

ಎಲ್ಲಿ ಇರುವೆ
ಕಗ್ಗ ಗುರುವೇ
ನೀನೆ ಒಂದು
ದಾರಿ ದೀಪ. 

Sunday, July 05, 2020

" ಇರುವದೆಲ್ಲವ ಬಿಟ್ಟು "

" ಇರುವದೆಲ್ಲವ ಬಿಟ್ಟು "
ಧರೆಯ ಮೇಲೆ ಧಾರೆ
ಕಲ್ಲು ಮಣ್ಣು ಎಲ್ಲ
ಒದ್ದೆ
ಕಿವಿಯಲ್ಲಿ ಏಕತಾನ

ಹಳೆಯ ಹಾಡು,
ಹಳೆಯ ನೆನಪು,
ಕಾಡುವ ಕಾಲ. 

ಮುಗ್ಗುಲು ವಾಸನೆ
ಬಿಸಿನೀರ ಸ್ನಾನ
ಹಬೆಯ ಕಾಪಿ.

ಒಂದೇ ಸಮನೆ
ಬೇಸರ ಇಲ್ಲದೆ
ಈ ಧಾರಾಕಾರ. 

ರಣಬೇಸಿಗೆಯಲಿ
ಹುಡುಕಿದೆ ತಂಪಾದ
ಹನಿ ಮಳೆ
ಈಗ ಮಳೆಗಾಲದ ಕತ್ತಲೆ
ಕಳೆದು , ಮೋಡ ಹರಿದು
ಸೂರ್ಯನ ನೋಡುವ ತವಕ. 

" ಇರುವದೆಲ್ಲವ ಬಿಟ್ಟು "