Tuesday, July 07, 2020

ಒಳ ನೋಟ

ನಂಗೆ ನನ್ನ ಕಂಡರೆ
ಇಷ್ಟ ಇಲ್ಲ 
ಯಾಕೆ ಗೊತ್ತಿಲ್ಲ.

ಕನ್ನಡಿ ನೋಡದಾಗೆಲ್ಲ
ಬೇಜಾರು.
ಅವರು ಇವರು
ಹೊಸದು ತಂದಾಗೆಲ್ಲಾ
ನನಗೇಕೋ ಕಸಿವಿಸಿ.

ನಲಿಗೆ ತುದಿಯಲ್ಲಿ
ಕೊನೆಯಲ್ಲಿ
ಎಲ್ಲಾ
ಕಹಿ ಕಹಿ. 

ಹೋಗಲಿ ಬಿಡಿ
ನಾಯಾಕೆ ಅಲಕ್  ನಿರಂಜನ್
ಆಗಿ ಎಲ್ಲ ಬಿಟ್ಟು
ಆರಾಮಾಗಿ ಇರಬಾರದು ?

ಅದೂ ಆಗಿಲ್ಲ .
ಬಿಡಲು ಆಗದೆ
ಹಿಡಿಯಲು ಆಗದೆ
ಎಡಬಿಡಂಗಿ ಆಗ್ಬಿಟ್ಟೆ .

ಪುಸ್ತಕ ಓದಿದೆ.
ತರ್ಕ ಮಾಡಿದೆ .
ದೊಡ್ಡವರ ವಚನನೂ
ಕೇಳ್ದೆ ,

ಆದ್ರೇನು
ಹಾಳು ಮನಸ್ಸು
ಕಗ್ಗ ಎಮ್ಮೆ ತರ
ಎಲ್ಲಿನ್ದಎಲ್ಲಿಗೆ
ಎಳೆದು ಎಳೆದು
ಮನ್ಸಒಳಗೆಲ್ಲ ತರಚಿ
ಒಂತರ ಉರಿ
ಹರಡಿಕೊಂಡು
ಗೋಳು ಹೊಯಿತಿದೆ. 

ನಾಳೆಯಿಂದ ಧ್ಯಾನ
ಮಾಡಬೇಕು. 
ಮನಸಿನೊಳಗೆ
ಶಾಂತಿ ತರಬೇಕು. 
ನನ್ನ ನಾನು
ಪ್ರೀತಿ ಮಾಡಬೇಕು. 

ಎಲ್ಲಿ ಇರುವೆ
ಕಗ್ಗ ಗುರುವೇ
ನೀನೆ ಒಂದು
ದಾರಿ ದೀಪ. 

No comments: