Saturday, July 25, 2020

ಹುಂಬ

ನಾನೊಬ್ಬ ಹುಂಬ
ನಿಂತಲ್ಲಿ ಕಂಬ
ನನ್ನ ನೆಲೆ ಬಿಟ್ಟು
ಆಚೀಚೆ ಹಂದೆ !

ಯಾರ ಹೇಳಿದರು
ಕೇಳದ ಕೊರಡು

ಇವರಿಗೇನು ಗೊತ್ತು
ಬರೀ ಖಾಲಿ ಹೊಟ್ಟು

ನನಗೇನು ಗೊತ್ತಿಲ್ಲ
ಅನ್ನುತ್ತಾ ...
ಒಳಒಳಗೆ
ನಂಗೆಲ್ಲ ಗೊತ್ತು
ಎಂದು ಬೀಗುತ್ತ
ಕಟ್ಟೆ ಮೇಲೆ
ಕೈ ಕಟ್ಟಿ ಕುಳಿತೆ. 

ನದಿಯಾಚೆ
ಕಡಲಾಚೆ
ಗುಡ್ಡದಾಚೆ ಏನುಂಟು
ಯಾರು ಕಂಡವರು ?
ತುಂಬಾ ಏನೇನೂ
ಇದೆ ಎಂದು
ಹೇಳುವರು ಉಂಟು.
ಕಾಣದೆ ಇರುವುದು
ಏನುಇಲ್ಲಾ .
ಎಂದು ಹೇಳುವ ಹುಂಬ
ನಾನೊಬ್ಬ.

No comments: