ಅಲೆಗಳು ನಿರಂತರ
ಒಂದರ ಹಿಂದೆ ಇನ್ನೊಂದು.
ಕಟ್ಟಿದೆ ಗೋಡೆಗಳ
ನೋವಿನಲೆಗಳು ಮನ ಮುಟ್ಟದಿರಲೆನ್ದು.
ಅದ ಮೀರಿ ಬಂದವಲೆಗಳು,
ಅಲೆಯ ಹನಿಗಳು ಚದುರಿತು ಮನದ ತುಂಬಾ
ಒದ್ದೊದ್ದೆ.
ಮೂಕ ಭಾವ.
ಮುರಿದು ಬಿದ್ದ ಅಸಹಾಯಕ ಗೋಡೆ.
ಕತ್ತಲೆಯ ಮೂಲೆ ಹಿತವಾಗಿದೆ.......
ಗೊತ್ತಾಯಿತೀಗ ಮೂಲೆಯಲಿ ಕುಳಿತು,
ಅಲೆಗೆ ತಡೆ ಹಾಕುವುದು ಸಲ್ಲ.
ಮನದ ಅಲೆಯ ನೋಡುತ ಬದುಕು ಧ್ಯಾನಸ್ಥನಗಿ.
ಸಾಧ್ಯವಾದರೆ ಅಲೆಯ ಮೇಲೆ
ತೇಲುತ್ತಾ, ಅದರ ಏರಿಳಿತದೊಡನೆ
ಬದುಕು.
ನೋವಿನಲೆಗಳಿಗೆ ಕಾಲವೇ ಮುಲಾಮು.
3 comments:
ಶಶಿಯವರೆ,
ನಿಜವಾಗಿಯೂ ಹೌದು ನೋವಿನಲೆಗಳಿಗೆ ಕಾಲವೇ ಮುಲಾಮು. ಆದರೆ ಆ ಕಾಲಕ್ಕೆ ಕಾಯುವ ತಾಳ್ಮೆಯನ್ನು ನಾವು ನೋವಿನಲೆಗಳನ್ನು ಹೊತ್ತಿರುವ ಮನದೊಳಗಿಂದಲೇ ತರಬೇಕಷ್ಟೇ!
@Tej.hegade
I agree with you
Very well said :)
Post a Comment