Saturday, May 30, 2020

ನಾನು

ಕಳವಲದ ಸಮಯ
ಮನವೊ ವ್ಯಗ್ರೋಮಯ

ಚಡಪಡಿ ಕೂತಲ್ಲಿ ನಿಂತಲ್ಲಿ
ಮಲಬದ್ಧತೆ  ಆಗಿಲ್ಲಿ
ದೇಹ ಕುಂತಲ್ಲಿ
ಮನ ಹಾರುತ ಹೋಯಿತು ಮುಗಿಲಲ್ಲಿ

ನನ್ನ ಮುತ್ತಜ್ಜನ ಮುತಜ್ಜ
ಅವನ ಹಿಂದೆ ಹಲವು ತಲೆಮಾರು ಜಜ್ಜಿ
ಮುರುಡಿ ತಿರುಜಿ ಕಾಯಿಲೆ ಕಜ್ಜಿ
ಈ ಎಲ್ಲ ಕಥೆ ಹೇಳಿದ್ದಳು ನನ್ನ ಅಜ್ಜಿ

ನಾ ಇಲ್ಲಿ ಶತಮಾನ ಇಪ್ಪತ್ತೊಂದರಲ್ಲಿ
ಕರ ಕರ ಎನ್ನುತ್ತಾ ಮನದಲ್ಲಿ
ಮಹಾವಿಶ್ವದ ಎದರು ವಾಮನ ರೂಪದದಲ್ಲಿ
ಮೂರನೇ ಹೆಜ್ಜೆ ಇಡಲಿ, ಆದರೆ  ಎಲ್ಲಿ?

Friday, May 29, 2020

ಒಂದು ಸಂಜೆ

ತೀರದಲ್ಲಿ
ಅಲೆಗಳ ಬದಿಯಲ್ಲಿ
ನೆಡೆಯುತ್ತಾ
ದೂರದ ದಿಗಂತ ನೋಡುತ್ತಾ
ಮುಂದೆ
ಮುಂದೆ
ಸಾಗಿದ್ದೆ. 
ಏಕೋ
ತಿರುಗಿ
ನೋಡಿದರೆ
ನನ್ನ

ಮನಸ್ಸು
ಅಲ್ಲೇ
ಮರಳ ಮೇಲೆ ಕುಳಿತು
ಕಾಲವನು ದಾಟಿ
ಮುಸುಕಿನಾ ಸಂಜೆಯಲಿ
ಒಂದೇ ಸಮನೆ ಅಪ್ಪಳಿಸುವ ಅಲೆಗಳಲಿ
ಹಳೇ ನೆನಪುಗಳನು ತಡವಿ ತಡವಿ
ಸವಿಯುತಿತ್ತು ಬೇಯುತಿತ್ತು. 
ಹರಿದ ನೆನಪುಗಳ ಮುರಿದ ನಂಟ
ಹೇಗಾದರೂ ಮರಳಿನಿಂದಾದರೂ ಸರಿ
ಅಂಟಿಸಲು ಒದ್ದಾಡುತಿತ್ತು

ಓ ಮನಸೇ
ಬಾ
ಹೋಗುವ ಮುಂದೆ
ಇರಲಿ ನೆನಪಿನ ಕಂತೆ ಹಿಂದೆ

ನನ್ನ ನೋಡಿ
ತಿರುಚಿದ ನಗು ನಕ್ಕು
ಚೀಪಿದ ಒರಟೆ,
ಒಂತರ ರುಚಿ
ರಾತ್ರಿ ಅನ್ನ ನಿನ್ನೆ ಕುದಿಸಿದ ಸಾರು
ಏಕೋ ಈ ಎಲ್ಲ ತುಡುವು
ನನ್ನ ಬಿಡದು
ನೀ ಹೋಗು ಮುಂದೆ
ನಾ ಸ್ವಲ್ಪ ಇಲ್ಲಿ  ಕೂತು ಬಂದೆ

ಹೀಗೇ ಆ ಸಂಜೆ ರಾತ್ರಿ ಆಯ್ತು
ಮತ್ತೊಮ್ಮೆ
ನೆನಪಿನ ಲಗಾಮು
ನನ್ನ ಕೈಯಿಂದ
ಜಾರಿತ್ತು .