Friday, August 14, 2020

ಕಪ್ಪು ಬಿಳಪು

ಕಪ್ಪು ಬಿಳಪು 

ಎರಡರಲ್ಲೊಂದು.  

ಕಪ್ಪೋ 

ಬಿಳಿಪೊ.  

ಹಂಡ ಹುಂಡ.  

ಅರ್ಧ  ಪೂರ್ತಿ . 

ಅಲ್ಲಿ ಇಲ್ಲಿ . 

ಜೀವನ ಸವದಂತೆ ,

ಎರಡು ಕಲಸಿ 

ಮಬ್ಬಾಗಿ ಮೋಡದ ಬಣ್ಣ ಬಂದು . 

ಬೇವು ಬೆಲ್ಲ ಕಲಸಿ 

ಮೂರನೇ ರುಚಿ ಹುಟ್ಟಿ 

ಈ ನಡುವಿನ ರುಚಿ 

ಈ  ಕಲಸಿದ ಬಣ್ಣ 

ಬಾಳೆಲ್ಲ ಹರಡಿ 

ಕೊನೆಗೊಮ್ಮೆ ತಿಳಿದೆ 

ನಾ ಅನ್ಕೊಂಡ ಚಿತ್ರಪಠ ಮೂಡದೆ 

ಹೊಸ ರುಚಿಯಂದು

ಹೊಸ ಬಣ್ಣವೊಂದು

ಬಂದು 

ನಿತ್ಯ ಸತ್ಯವಾಯ್ತು . 


Saturday, August 01, 2020

ನಗುವ ಕಡಲಲ್ಲಿ

ಅಳುವ ಕಡಲೊಳು
ತೇಲಿ ಬರುತಿದೆ
ನಗೆಯ ಹಾಯಿ ದೋಣಿ

ದೋಣಿಯಲಿ ಕುಳಿತ
ಹುಡುಗಿ ದಿಂಗಂತ
ನೋಡಿ ನೀರಿನಲಿ ]
ಕೈ ತೀಡಿ
ಕಿರುನೋಟದಿ
ಕಿರಿ ಹಿಡಿದು
ನೋಡಿದಳ್ .

ಎಲ್ಲೊಲ್ಲೂ
ಅಳುವೇ ?
ತಳವೇ
ಇಲ್ಲವೇ ?

ಆಕೆ  ಮುಳುಗುವ
ಸೂರ್ಯನಾ ನೋಡಿ
ಗಂಟಲ ತಿದ್ದಿ
ಮನದಲೇನೋ
ನಾಂದಿ ಮಾಡಿ
ಹಾಡಿದಳ್

ರಾಗ ಯಾವುದು
ನಾನು ಅರಿಯೆ. 
ಅರುಣ ಅಲ್ಲೇ ನಿಂತು
ಆಲಿಸಿದ .
ಭೋರ್ಗರೆಯುವ ಶರಧಿ
ಶಾಂತವಾಗಿ ಕಿವಿಗೊಟ್ಟಿತು
ರಾಗಕ್ಕೆ ತಾಳಕ್ಕೆ ಲಯವಾಗಿ
ಅಲೆಗಳು ಏರಿಳಿಯುತ್ತಿತ್ತು. 

ಒಂದೊಂದು ಹನಿ
ಯಾವುದೊ ಸುಖದಲ್ಲಿ
ನೆನೆಯುತ್ತಿತ್ತು
ರಾಗ ಒಳಗೆ ಹೊರಗೆ ಅರಿವಲ್ಲದೆ
ಹೊಯ್ದಾಡುತಿತ್ತು

ನಗುವ ಕಡಲಲ್ಲಿ
ತೇಲಿ ಹೋಗುತ್ತಿತ್ತು
ನಗೆಯ ಹಾಯಿ ದೋಣಿ . 




ಯಾವ ಮೋಹನ ಮುರಳಿ ಕರೆಯಿತು

ಯಾವ ಮೋಹನ ಮುರಳಿ
ಕರೆಯಿತು ದೂರ ತೀರಕೆ
ನಿನ್ನನು

ಕರೆದ ನಂತರ ಏನು
ಆಯಿತು
ಯಾರು ಅರಿಯರು!

ದೂರ ತೀರದಿ
ನಾನು ಹೋದೆ
ಏನೋ ಕನಸು
ಕಂಡು.

ಹೊಸ ಜಾಗ
ಹೊಸ ವಾಸನೆ
ಎಲ್ಲಿ ನೋಡಿದರು
ಹೊಸತನ.

ನಾನು ಹೇಳದೆ
ಯಾರು ಕೇಳದೆ
ತುಟಿಯ ಮೇಲೆ
ನಗುವ ಬಳಿದು,
ನಾಟ್ಯದ ಮಾಟದ
ನೆಡೆಯಲಿ ತೀರದ
ಮರಳ ಮೇಲೆ
ಗುಣುಗುಣು ಅನ್ನುತ್ತಾ
ತೇಲಿ ತೇಲಿ ನೆಡೆದೆ .

ದೊಡ್ಡ ಕಷ್ಟ
ಸಣ್ಣದಾಗಿ, ಸಣ್ಣ ಸುಖ
ದೊಡ್ಡದಾಗಿ
ಜಗವೆಲ್ಲ ಮಜವಾಗಿ
ಮುರಳಿ ಕರೆ
ಕೇಳಿ
ಈ ದೂರ ತೀರಕೆ ಬಂದ
ನನಗೊಂದು ಧನ್ಯತಾ ಭಾವ. 

ದಿನಗಳು ಕಳೆದವು
ಹಕ್ಕಿ ಹಾರಿತು
ನೀರು ಹರಿಯಿತು
ಅಲೆಗಳ ಮೇಲೆ ಅಲೆಗಳು
ಬಂದು ಹೋದವು. 
ಹೊಸತನ ಕಳೆದು
ಎಕಾನತೆ ಬಂದು
ಸಣ್ಣ ತೊಂದರೆ
ದೊಡ್ಡ ಕೊರಗು
ಆಗಲು .

ನಾನಿಲ್ಲಿ ಬಂದು
ಕಾಯುತಿರುವೆ
ಮುರಳಿ ಕರೆಗೆ
ದೂರ ತೀರಕೆ
ಹೋಗಲು.