Saturday, August 01, 2020

ನಗುವ ಕಡಲಲ್ಲಿ

ಅಳುವ ಕಡಲೊಳು
ತೇಲಿ ಬರುತಿದೆ
ನಗೆಯ ಹಾಯಿ ದೋಣಿ

ದೋಣಿಯಲಿ ಕುಳಿತ
ಹುಡುಗಿ ದಿಂಗಂತ
ನೋಡಿ ನೀರಿನಲಿ ]
ಕೈ ತೀಡಿ
ಕಿರುನೋಟದಿ
ಕಿರಿ ಹಿಡಿದು
ನೋಡಿದಳ್ .

ಎಲ್ಲೊಲ್ಲೂ
ಅಳುವೇ ?
ತಳವೇ
ಇಲ್ಲವೇ ?

ಆಕೆ  ಮುಳುಗುವ
ಸೂರ್ಯನಾ ನೋಡಿ
ಗಂಟಲ ತಿದ್ದಿ
ಮನದಲೇನೋ
ನಾಂದಿ ಮಾಡಿ
ಹಾಡಿದಳ್

ರಾಗ ಯಾವುದು
ನಾನು ಅರಿಯೆ. 
ಅರುಣ ಅಲ್ಲೇ ನಿಂತು
ಆಲಿಸಿದ .
ಭೋರ್ಗರೆಯುವ ಶರಧಿ
ಶಾಂತವಾಗಿ ಕಿವಿಗೊಟ್ಟಿತು
ರಾಗಕ್ಕೆ ತಾಳಕ್ಕೆ ಲಯವಾಗಿ
ಅಲೆಗಳು ಏರಿಳಿಯುತ್ತಿತ್ತು. 

ಒಂದೊಂದು ಹನಿ
ಯಾವುದೊ ಸುಖದಲ್ಲಿ
ನೆನೆಯುತ್ತಿತ್ತು
ರಾಗ ಒಳಗೆ ಹೊರಗೆ ಅರಿವಲ್ಲದೆ
ಹೊಯ್ದಾಡುತಿತ್ತು

ನಗುವ ಕಡಲಲ್ಲಿ
ತೇಲಿ ಹೋಗುತ್ತಿತ್ತು
ನಗೆಯ ಹಾಯಿ ದೋಣಿ . 




No comments: