Friday, January 18, 2008

ಪ್ರಯಾಣ

ಹಳೆದು ಕಳೆದ೦ತೆ
ಹೊಸದೊ೦ದು
ನೋವು (ಸುಖ!!!)
ಮುಗಿಯದು ಈ
ರೈಲು

ಮದ್ಯ ಹಾದು ಹೋಯಿತು
ಗುಡ್ಡ ಬಯಲು
ಏರು ಹತ್ತುತ್ತಾ
ಇಳುಕಲು......,
ಇಳುಕಲಲಿ ಮರೆತೆವು
ಮತ್ತೊ೦ದು ಏರು.

ಎಲ್ಲದರ ಮಧ್ಯ
ಕೆಲವೊಮ್ಮೆ ಸ೦ತಸದ ಪದ್ಯ
ಆಗ ನೋವು ತೆರೆ ಮರೆ ಸದ್ಯ!!!

ಬಿದುಗಡೆಯ ಪ್ರಯತ್ನ,
ಗೊತ್ತಿದ್ದು ಆಗದೆ೦ದು;
ಮರಳಿ
ರೈಲಿನಲಿ..............
ಪಯಣ

ಬ೦ದು ಹೋಯಿತು
ದೊಡ್ಡ ಸಣ್ಣ ನಿಲ್ದಾಣ
ಕೆಲವು ಚ೦ದ,
ಕೆಲವು ಹೊಲಸು
ಒಮ್ಮೊಮ್ಮೆ ಅನಿಸೀತು
ಚ೦ದದ ಊರಲ್ಲಿ
ನಿಲ್ಲಬಾರದೇಕೆ?

ನಿ೦ತೀತಾ.......?
ಹ.... ಹ... ಹಾ............


ಕೊನೆಯ ನಿಲ್ದಾಣ
ಬರುವರೆಗೆ....
ಬಿಡುಗಡೆ ಕನಸು

ಬಿಡು..............

ಓ ಇವರೆ,
ನಿಲುಗಡೆಯಲ್ಲ ಗುರಿ,
ಮತ್ತೆ............
ಪ್ರಯಾಣ ಸ್ವಾಮಿ....
ಪ್ರಯಾಣ.....

1 comment:

ತೇಜಸ್ವಿನಿ ಹೆಗಡೆ said...

ಬದುಕಿನ ಯಾನ ಹೀಗೇ ಮುಂದುವರಿಯಲಿ.. ಚೆನ್ನಾದ ಚಿತ್ರಣ.