ಕಳೆದು ಹೋದದ್ದ ಹುಡುಕುತ್ತಾ...
ಹುಡುಕಿದ್ದು ಸಿಕ್ಕಿದಾಗ
ಮತ್ತೊ೦ದನ್ನು ಹುಡುಕುತ್ತಾ
ಹುಡುಕುವಾಗಲೇ
ಸಿಕ್ಕಿದ್ದನ್ನು ಕಳೆದುಕೊಳ್ಳೂತ್ತಾ
ಬದುಕಿನ ಗಾಲಿ ಉರುಳಿದೆ
ಹಿ೦ದೆ ಬದುಕಲೋ
ಮು೦ದೆ ಬದುಕಲೋ
ಇ೦ದು ಬದುಕಲೋ
ತಿಳಿಯದೆ
ಈ ಮೂರರ ಕಲಸುಮೆಲೋಗರದಲ್ಲಿ
ನಾನಿದ್ದೆ!!!!!!!
ಹಿ೦ದೆ ಕಳೆದದ್ದನ್ನು
ನಾಳೆಯಲ್ಲಿ ಹುಡುಕುತ್ತಾ
ಇ೦ದು ಖಾಲಿ ಆಗಿದೆ...
ಹಿ೦ದಿನ ಜ್ಞಾನ
ಇ೦ದನ್ನು ಮು೦ದನ್ನು
ಅಳೆಯುವ ಸೇರಗಿದೆ..
ಹಿ೦ದಿನ ನಾನು ಎ೦ಬ ಜ್ಞಾನ
ಇ೦ದಿನ ನಾನಾರು ಎ೦ದು ಕೇಳದೇ ಹೋಗಿದೆ!
7 comments:
wah wah!
chandiddu..
ನಾಳೆ ಬದುಕಿದರೆ ಹಿಂದೆ ಬದುಕಿದ್ದಂತೆ...ಇಂದು ಬದುಕಿರುವುದಕ್ಕೆ ಸಾಕ್ಷಿಕೂಡ.ಇಂತಹ ಉತ್ತಮ ಕವನಗಳು ಕಳೆದುಹೋಗದಿರಲಿ. 'nostalgia' ಅವರೆ ತಾವು ತಮ್ಮ ಕಿರು ಪರಿಚಯವನ್ನು ನೀಡುವಿರಾ?
hi, you can visit http://nishachara101.googlepages.com/, I am from village near Sagara, called Dodderi.
ನಿಜ್ವಾಗ್ಲೂ ತುಂಬಾ ಕಿರು ಪರಿಚಯನೇ ಕೊಟ್ಟಿದ್ರಿ..ತಮ್ಮ googlepageನಲ್ಲಿ ;-)
nice poem ....
@Dinesh
Thanks for the encouragement, I saw your poems I have marked the site, this weekend I will read, but photos are good.
Post a Comment